ಡಂಪಿ ಮಟ್ಟಮಾಪಕ -
ಮೋಜಣಿ ಉಪಕರಣ (ಡಂಪಿ ಲೆವೆಲ್). ಭೂಪ್ರದೇಶದ ವಿವಿಧ ಭಾಗಗಳ ಏರುತಗ್ಗುಗಳನ್ನು ನಿಖರವಾಗಿ ನಿರ್ಧರಿಸಲು ಇದನ್ನು ಬಳಸುವುದಿದೆ. (-ಮಟ್ಟಮಾಪಕ, ಕುಕ್ ಪರಾವರ್ತನಶೀಲ ಮಟ್ಟಮಾಪಕ (ಕುಕ್ ರಿವರ್ಸಿಬಲ್ ಲೆವೆಲ್). ಕುಷಿಂಗನ ಮಟ್ಟಮಾಪಕ-ಹೀಗೆ ವಿವಿಧ ಬಗೆಯ ಉಪಕರಣಗಳು ಬಳಕೆಯಲ್ಲಿವೆ. ಇವೆಲ್ಲವುಗಳಲ್ಲಿಯೂ ಸರ್ವಸಾಮಾನ್ಯವಾಗಿರುವ ಭಾಗಗಳು ಇವು: 1 ಮಟ್ಟಮಾಡುವ ಆಧಾರಶೀರ್ಷ. (ಲೆವೆಲಿಂಗ್ ಹೆಡ್), 2 ಅಂಗ (ಲಿಂಬ್), 3 ದೂರದರ್ಶಕ(ಟೆಲಿಸ್ಕೋಪ್), 4 ಮಟ್ಟಗೊಳವೆ(ಲೆವೆಲ್ ಟ್ಯೂಬ್) ಅಥವಾ ಗುಳ್ಳೆನಾಳ (ಬಬಲ್ ಟ್ಯೂಬ್). ಈ ಉಪಕರಣದ ಆಧಾರಕ್ಕೆ ಹೊಂದಿಸಲಾಗಿರುವ ದೂರದರ್ಶಕವನ್ನು ಅದರ ನೀಳ ಅಕ್ಷದ (ಲಾಂಜಿಟ್ಯೂಡಿನಲ್ ಆ್ಯಕ್ಸಿಸ್) ಮೇಲೆ ತಿರುಗಿಸಲು ಸಾಧ್ಯವಿಲ್ಲ. ಬದಲಾಗಿ ನೇರ ಅಕ್ಷದ ಸುತ್ತ ತಿರುಗಿಸಲು ಸಾಧ್ಯವುಂಟು. ಆಧಾರದಿಂದ ದೂರದರ್ಶಕವನ್ನು ಹೊರತೆಗೆಯುವುದೂ ಆಗದು. ಇದಕ್ಕೆ (-ಮಟ್ಟಮಾಪಕಕ್ಕಿಂತ ಹೆಚ್ಚಿನ ದೃಢತೆ ಇದೆ.
(ಎನ್.ಎನ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ